೧೯೬೫ರ ಭಾರತ-ಪಾಕಿಸ್ತಾನ ಯುದ್ಧವು ೧೯೬೫ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಾಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು. == ಉಲ್ಲೇಖಗಳು ==